Gemini_Generated_Image_hp6njihp6njihp6n
PlayPause
previous arrow
next arrow

ತ್ಯಾಗರಾಜು ಸೆಂಟ್ರಲ್ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಶ್ರೇಯುತ ಅರೇನಹಳ್ಳಿ ಧರೇಯೇಂದ್ರ ಕುಮಾರ್ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯಾನಂತರ ಭಾಷಾ ಆಧಾರದ ಮೇಲೆ ದೇಶದ ವಿವಿಧ ಪ್ರಾಂತಗಳು ರಾಜ್ಯಗಳಾಗಿ ರೂಪುಗೊಂಡವು ಎಂದು ತಿಳಿಸಿದರು. ಇಂದಿನ ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ ಹಾಗೂ ಭಾಷೆಯ ಬಗ್ಗೆ ಅರಿವು ಅತ್ಯವಶ್ಯಕವೆಂದು ಅವರು ಮನವರಿಕೆ ಮಾಡಿದರು.

ಬಿಡದಿ ಸುತ್ತಮುತ್ತಲಿನ ಸಿಬಿಎಸ್‌ಇ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಶಿಕ್ಷಕರಿಗೆ ‘ಗುರುರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಮ್ಮ ಶಾಲೆಯ ಕನ್ನಡ ಶಿಕ್ಷಕರಾದ ಶ್ರೇಯುತ ನಟರಾಜು ಆರ್ ಹಾಗೂ ಶ್ರೀಮತಿ ಕೃಷ್ಣವೇಣಿ ಅವರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಸ್ಕೃತಿಕ ನೃತ್ಯ ಹಾಗೂ ಕಿರು ನಾಟಕಗಳ ಮೂಲಕ ಕನ್ನಡ ನಾಡಿನ ಗತವೈಭವವನ್ನು ಮನಮೋಹಕವಾಗಿ ಪ್ರದರ್ಶಿಸಿದರು. ಜಾನಪದ ಕಲಾವಿದರ ತಂಡದ ಚೆಂಡೆ, ಮದ್ದಳೆ, ಕಂಸಳೆ ಹಾಗೂ ಕಾಮಿಡಿ ಕಿಲಾಡಿ ಕಲಾವಿದರ ಹಾಸ್ಯ ಪ್ರದರ್ಶನ ಕಾರ್ಯಕ್ರಮದ ರಂಗು ಹೆಚ್ಚಿಸಿತು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಶ್ರೇಯುತ ಕೆ.ಪಿ. ಕೃಷ್ಣಪ್ಪ, ಕಾರ್ಯದರ್ಶಿಗಳಾದ ಶ್ರೇಯುತ ಸ್ವೇಯಶ್, ಐಡಿಎಫ್‌ನ ಶ್ರೇಯುತ ರಾಮಕೃಷ್ಣನ್, ಬಿಡದಿ ರೋಟರಿ ಸೆಂಟ್ರಲ್‌ನ ಶ್ರೇಯುತ ರಮೇಶ್ ಕುಮಾರ್, ಶಾಲೆಯ ಸಿಇಒ ಶ್ರೇಯುತ ಸಂದೀಪ್, ಪ್ರಾಂಶುಪಾಲರಾದ ಶ್ರೀಮತಿ ವಿದ್ಯಾ ಲಕ್ಷ್ಮಿ ಹಾಗೂ ಅನೇಕ ಪೋಷಕರು ಉಪಸ್ಥಿತರಿದ್ದರು.